
25th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.೨೪-ನಗರದ ಬಿ.ವ್ಹಿ.ವ್ಹಿ ಸಂಘದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ನೂತನವಾಗಿ ಪ್ರೇರಣಿ (ಪೀಡಿಯಾಟ್ರಿಕ್ ರಿಸಸಿಟೇಶನ್ ಎಂಡ್ ಎಮರ್ಜನ್ಸಿ ರಿಸರ್ಚ ನೆಟ್ವರ್ಕ್ ಇಂಡಿಯಾ) ಕಛೇರಿ ಹಾಗೂ ಸ್ಕಿಲ್ ಲ್ಯಾಬ್ ಅನಾವರಣ ಕಾರ್ಯಕ್ರಮ ಜರುಗಿತು.
ಪ್ರೇರಣಿ ಚೇರಪರ್ಸನ್ ಡಾ.ಜಯಶ್ರೀ ಮತ್ತು ಕೋ-ಚೇರಪರ್ಸನ್ ಡಾ.ಇಂಧುಮತಿ ಸಂತಾನಮ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಜಯಶ್ರೀ ಮಾತನಾಡಿ, ಭಾರತದ ಚಿಕ್ಕಮಕ್ಕಳ ಪುನಃಶ್ಚೇತನ ಮತ್ತು ತುರ್ತು ಸಂಶೋಧನಾ ನೆಟವರ್ಕ ಭಾರತದಲ್ಲಿ ರೂಪುಗೊಂಡ ಹೊಸ ರಾಷ್ಟ್ರೀಯ ಮಕ್ಕಳ ತುರ್ತು ವೈದ್ಯಕೀಯ (Pಇಒ) ಸಂಶೋಧನಾ ಜಾಲವಾಗಿದೆ ಎಂದರು.
ಈ ಜಾಲವು ಭಾರತದಲ್ಲಿ ಮಕ್ಕಳ ತುರ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಯೋಗ ಮತ್ತು ಸಂಶೋಧನೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಇದೊಂದು ಅಂತರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಸಂಶೋಧನಾ ನೋಂದಾಯಿತ ಸಂಸ್ಥೆಯಾಗಿದ್ದು, ಅಂತರಾಷ್ಟಿçÃಯ ಸಂಶೋಧನೆಯ ಸಂಘದ ಮಾರ್ಗದರ್ಶನದಲ್ಲಿ ಸಂಶೋಧಕ ಸಂಸ್ಥೆಗಳೊAದಿಗೆ ಸಂಶೋಧನೆಯಲ್ಲಿ ತೊಡಗಿದೆ ಎಂದು ಡಾ.ಜಯಶ್ರೀ ಹೇಳಿದರು.
ಡಾ.ಇಂದುಮತಿ ಸಂತಾನಮ್ ಮಾತನಾಡಿ, ದೇಶದ ವಿವಿಧ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಚಿಕ್ಕಮಕ್ಕಳ ವಿಭಾಗದ ತಜ್ಞವೈದ್ಯರುಗಳು ಈ ಸಂಶೋಧನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಬಿ.ವಿ.ವಿ ಸಂಘದಡಿಯಲ್ಲಿ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಇಂತಹ ಸಂಶೋಧನಾ ನೆಟವರ್ಕ ಸ್ಥಾಪಿಸಿದ್ದು ನಿಜಕ್ಕೂ ಒಂದು ಹೊಸ ಮೈಲಿಗಲ್ಲು. ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಸಂಶೋಧನೆಗೆ ನಮ್ಮ ಆಸ್ಪತ್ರೆಯೂ ಕೈ ಜೋಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದೇಶದ ಪ್ರೇರಣಿ ಜಾಲ ಸ್ಥಾಪಿಸಿದ ಬಾಗಲಕೋಟೆಯ ಎಸ್.ಎನ್.ಮೆಡಿಕಲ್ ಕಾಲೇಜು, ವಿಜಯಪುರದ ಬಿ.ಎಲ್.ಡಿ.ಇ, ರಾಯಚೂರಿನ ನವೋದಯ, ಚಂಡಿಗಡದ ಪಿ.ಜಿ.ಐ ಹಾಗೂ ಚೆನೈನ ಮೆಹೆತಾ ಚಿಲ್ಡçನ್ ಇನ್ಸಟ್ಯೂಟ್ ಕಾಲೇಜುಗಳ ಸಂಶೋಧನೆಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಸ್ಥಳೀಯ ಚಿಕ್ಕಮಕ್ಕಳ ವೈದ್ಯ ಡಾ.ಆರ್.ಟಿ.ಪಾಟೀಲ್, ಪ್ರಸೂತಿ ಮತ್ತು ಚಿಕ್ಕಮಕ್ಕಳ ವಿಭಾಗದ ತಜ್ಞವೈದ್ಯರೊಂದಿಗೆ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯ ಪ್ರಮುಖರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನೆ ಕುರಿತು ಡಾ.ರಾಘವೇಂದ್ರ ವನಕಿ ಮಾತನಾಡಿದರು. ಡಾ.ಪಲ್ಲವಿ ಚರಂತಿಮಠ ಪರಿಚಯಿಸಿದರು. ಡಾ.ರಮೇಶ ನೀಲಣ್ಣವರ ವಂದಿಸಿದರು.
ಕಲಬುರಗಿ:- ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿಯನ್ನು ಕೂಡಲೆ ಕೆಲಸದಿಂದ ವಜಾಗೊಳಿಸವ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಅಣವಿರಪ್ಪ ಎಸ್. ಹೆಬ್ಬಾಳ ಅವರ ಸಮುಖದಲ್ಲಿ ಮನವಿ ಪತ್ರ ಸಲ್ಲಿಸಿದ್ದರು .
ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿಕೆ ಬೊಮ್ಮಗೊಂಡೇಶ್ವರ ತತ್ವಗಳ ಪ್ರಚಾರ ಆಗಲಿ